Wednesday, November 5, 2014

ಕವನ ಅಂತೊಂದು ಕವನ.!!


ಕವನ :
ಜೀವ-ಭಾವಗಳ ಸಮ್ಮಿಲನ.
ಆಗಸದಡ್ಡಗಲಕ್ಕೂ ಹರವಿಕೊಂಡ ವರ್ಣ.
ಗುಪ್ತಗಾಮಿನಿಯ ಜುಳುಜುಳು ಧ್ವಾನ.
ಕಾನನದನಂತ ಮೌನ.!!

ಕವನ :
ಅರಿವಿನ ಹೂರಣ.
ಜ್ಞಾನದ ಸ್ಖಲನ.
ಸುಶ್ರಾವ್ಯ ಗಾನ.
ಒಮ್ಮೊಮ್ಮೆ ನೀರವತೆಯ ತಾನ.

ಕವನ :
ಅಂತರಂಗ ತೋಂತನಾನಾ.
ಅಂಬಿಕಾ ಪದಕಮಲ ದರ್ಶನ.
ಒಮ್ಮೊಮ್ಮೆ ಕಾಲಭೈರವನ ರುದ್ರನರ್ತನ.!!

-ಡಿ.ವಿ.ಪಿ-

1 comment:

  1. ಭಾವ, ಧ್ಯಾನ, ಮೌನ ಎಲ್ಲ ಸೇರಿ ಆಧ್ಯಾತ್ಮದತ್ತ ಕೇಂದ್ರೀಕೃತಗೊಳಿಸುವ ಅದ್ಭುತ ಕವಿತೆ..ಸಕತ್ ಇಷ್ಟ ಆಯ್ತು ಕಣ್ಲಾ :)

    ReplyDelete